ಅನ್ನದೇಗುಲ ಎಂಬ ವಾಸ್ತವ ಕವಿತೆ - ಅನಿತ ಅನುಕೃತಿ ಮನುಷ್ಯನ ಬದುಕನ್ನು ಕಾಲಕಾಲಕ್ಕೆ ಇತಿಹಾಸವಾಗಿಸುವಲ್ಲಿ ಸಾಹಿತ್ಯದ ಹಾದಿಯು ಹಿರಿದು. ಈ ನಿಟ್ಟಿನಲ್ಲಿ ಕಾವ್ಯ ಛಂದಸ್ಸು, ಅಲಂಕಾರಗಳಿಂದ ಸಿಗಂರಿಸಿಕೊಂಡು ಮನಸ್ಸಿಗೆ ಮುದ ನೀಡುವ ಪ್ರಕಾರ ಕಾವ್ಯ...... ಆಧುನಿಕ ಕಾವ್ಯವು ಶಾಸ್ತ್ರೀಯ ಚೌಕಟ್ಟನ್ನು ಮೀರಿಯು ಹೊಸ ಪ್ರಾಸದೊಂದಿಗೆ ಸುಂದರ ಪದಪುಂಜಗಳಲ್ಲಿ ರೂಪುಗೊಂಡು ಸಹೃಯರ ತನುಮನಗಳಿಗೆ ತಂಪೆರೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಂದಿನ ಯುವಕವಿಗಳ ನವನವೀನ ಕವಿತೆಗಳು ಜೀವೋನ್ಮುಖಿ ಚಿಂತನೆಗಳೊಂದಿದೆ ರಚನೆಯಾಗುತ್ತಿರುವುದು ಕನ್ನಡ ಸಾಹಿತ್ಯದ ಬೆಳವಣಿಗೆಯ ಯುವೋದಯದ ಕಾಲವಾಗಿ ಕಾಣಬಹುದಾಗಿದೆ. ಈ ದಿಸೆಯಲ್ಲಿ ಪ್ರಸ್ತುತ ಸಮಾಜದ ವಾಸ್ತವ ಕನ್ನಡಿಯ ಹಲವು ಕವಿತೆಗಳು ಅತ್ಯಂತ ಜವಾಬ್ದಾರಿಯುತವಾಗಿ ರಚನೆಗೊಳ್ಳುತ್ತಿವೆ. ಈ ರಚನೆಗಳು ಕಳೆದ ಶತಮಾನದ ಕಾವ್ಯಲೋಕದ ಸ್ಥಿರಮಾದರಿಗಳಾಗಿ ಜನಿಸದಿದ್ದರೂ ವಾಸ್ತವವನ್ನು ಪ್ರತಿನಿಧಿಸುವ ಸರಳ ಶೈಲಿ ಕಾವ್ಯಶಕ್ತಿಗಳಾಗಿವೆ. ಅಂಕುರ ಅವರ 'ಅನ್ನ ದೇಗುಲ' ಕವಿತೆಯು ಎತ್ತಿಕೊಂಡವರ ಕೂಸು ಸಂಕಲನದ ಸಾತ್ವಿಕ ಚಿಂತನೆಯಾಗಿ ಶೋಧಿಸಬಹುದು. ಈ ಕವಿತೆಯ ಒಳಪದರುಗಳನ್ನು ನಮ್ಮ ತುರ್ತುಗಳಿಗೆ ವ್ಯವಸ್ಥಿತಗೊಳಿಸಿ ನೋಡಿದರೆ ಹಲವು ಹೊಸ ಆಯಾಮಗಳು ದೊರೆಯಬಹುದು. ಅನ್ನ ದೇಗುಲದೊಳಗೆ ...