Posts

Image
       *ಅನುಕರಿಸುವ ತತ್ವ*              ಮನುಷ್ಯ ಬದುಕಿನಲ್ಲಿ ಸತ್ಯ ಮತ್ತು ಸುಳ್ಳು ಎರಡೂ ನಮ್ಮನ್ನು ಪ್ರಭಾವಿಸುತ್ತವೆ. ಸತ್ಯ ಒಳಿತನ್ನು ಬಯಸಿದರೆ, ಸುಳ್ಳು ಕೇಡನ್ನು ಬಯಸುತ್ತದೆ. ಈ ಎರಡರಲ್ಲಿ ಯಾವುದನ್ನು ಅನುಸರಿಸಬೇಕೆಂಬ ಆಯ್ಕೆ ನಮ್ಮ ಸಂಸ್ಕಾರದ ಮೇಲೆ ನಿಂತಿರುತ್ತದೆ. 'ಗುಲಾಬಿ' ಗಿಡದಲ್ಲಿ  ಸುಂದರವಾದ ಹೂ, ಚುಚ್ಚುವ ಮುಳ್ಳು ಎರಡೂ ಇರುತ್ತವೆ. ನಮಗೆ ನೋವಾಗದ ಹೂವನ್ನೇ ಬಿಡಿಸಿಕೊಳ್ಳುತ್ತೇವೆ. ಹಾಗೆಯೇ, ನಮಗೆ  ತೊಂದರೆಯಾಗದಂತೆ, ಹಾಗೂ  ಇತರರಿಗೂ ತೊಂದರೆ ನೀಡದಂತೆ ಬದುಕಬೇಕಾದರೆ  ಸತ್ಯದ ಹಾದಿಯನ್ನು ಆಯ್ಕೆ ಮಾಡಿಕೊಳ್ಳವುದು ಉಚಿತ.  ಮನುಷ್ಯ ಬದುಕಬೇಕಾದರೆ ಒಳ್ಳೆಯತನ, ಸತ್ಯ,ಪ್ರಾಮಾಣಿಕತೆ ಬಹಳ ಅಗತ್ಯ. ನಮ್ಮ ಆತ್ಮತೃಪ್ತಿಯೇ ಅಂತಿಮವಾಗಿ ನಿಲ್ಲಬೇಕಾದ್ದು. ಆದ್ದರಿಂದ ಈ ಮೌಲ್ಯಗಳನ್ನು ಅನುಸರಿಸಿದಾಗಲೇ ಮಹತ್ವ ತಿಳಿವುದು. ಈ ಅರಿವು ಬಂದಾಗ ' ಹರನೆಂಬುದೇ ಸತ್ಯ, ಸತ್ಯವೆಂಬುದೇ ಹರನು.' ಎಂಬ ಮಾತು ಸಾಕ್ಷಿಭೂತವಾಗಿ ನಿಲ್ಲಬಹುದು. - ಅನುಕೃತಿ
Image
                                      ಉಬುಂಟು    ಉಬುಂಟು ಒಂದು ಒಳ್ಳೆಯ ಕಥೆ. ಆಫ್ರಿಕಾದ ಉಬುಂಟು ಸಂಸ್ಕೃತಿ ಪ್ರೇರಣಾತ್ಮಕವಾದುದು. ಒಮ್ಮೆ ಒಬ್ಬ ಮಾನವಶಾಸ್ತ್ರಜ್ಞರು ಆಫ್ರಿಕನ್ ಬುಡಕಟ್ಟಿನ ಆಟವನ್ನು ಪ್ರಸ್ತಾಪಿಸಿದರು. ಅವರು ಒಂದು ಮರದ ಸಮೀಪ ಸಿಹಿತಿಂಡಿಗಳ ಒಂದು ಬುಟ್ಟಿಯನ್ನು ಇರಿಸಿದರು ಮತ್ತು ಮಕ್ಕಳನ್ನು ೧೦೦ ಮೀಟರ್ ದೂರ ನಿಲ್ಲಿಸಿದರು. ನಂತರ ಅವರು ಮಕ್ಕಳಿಗೆ "ಯಾರು ಮೊದಲು ತಲುಪುವರೋ ಅವರು ಬುಟ್ಟಿಯಲ್ಲಿನ ಎಲ್ಲಾ ಸಿಹಿತಿಂಡಿಗಳನ್ನು ಪಡೆಯುತ್ತಾರೆ." ಎಂದು ಘೋಷಿಸಿದರು. 'ರೆಡಿ ಸ್ಟಡಿ ಗೊ!' ಎಂದರು. ಈ ಮಕ್ಕಳು ಈಗ ಏನು ಮಾಡಿದರೆಂದು ನಿಮಗೆ ಊಹಿಸಲು ಸಾಧ್ಯವೆ? ಅವರು ಎಲ್ಲರೂ ಪರಸ್ಪರ ಕೈಗಳನ್ನು ಹಿಡಿದಿದ್ದರು. ನಂತರ ಒಟ್ಟಿಗೆ ಮರದ ಬಳಿ ಓಡಿದರು. ಅಲ್ಲಿ ಇರಿಸಿದ್ದ ಬುಟ್ಟಿಯಲ್ಲಿನ ಸಿಹಿ ತಿಂಡಿಗಳನ್ನು ಸಮಾನವಾಗಿ ಹಂಚಿಕೊಂಡು ತಿಂದು ಸಂತೋಷಪಟ್ಟರು. ಆಗ ಮಾನವಶಾಸ್ತ್ರಜ್ಞರು ಮಕ್ಕಳನ್ನು ಕುರಿತು ಯಾಕೆ ಹೀಗೆ ಮಾಡಿದಿರೆಂದು ಕೇಳಿದಾಗ ಅವರು 'ಉಬುಂಟು' ಎಂದು ಉತ್ತರಿಸಿದರು. ಇದರ ಅರ್ಥವೇನೆಂದರೆ ಇತರರು ದುಃಖಗೊಂಡಾಗ ಒಬ್ಬರಿಗೆ ಹೇಗೆ ಸಂತೋಷವಾಗಬಹುದು?  ಎಂದು. 'ಉಬುಂಟು' ಎಂದರೆ ಆಫ್ರಿಕನ್ ಬುಡಕಟ್ಟು ಭಾಷೆಯಲ್ಲಿ "ನಾನು ಎಂದರೆ ನಾವು." ಈ ಉತ್ತಮ ಸಂದೇಶ ಎಲ್ಲಾ ಪೀಳಿಗೆ...
                                                                                ಕನ್ನಡಾಭಿಮಾನ               ಒಮ್ಮೆ ಮಾರವಾಡಿಗಳ ಬಟ್ಟೆ ಅಂಗಡಿಯಲ್ಲಿ ಸೀರೆ ಕೊಂಡುಕೊಳ್ಳಲೆಂದು ಹೋಗಿದ್ದೆ. ಆ ಅಂಗಡಿಯ ಬಳಿಗೆ ಒಬ್ಬ ಹೆಣ್ಣುಮಗಳು ಬಂದು “ಸರ್,  ಒಂದೆರಡು ನಿಮಿಷ ಮಾತಾಡಬಹುದಾ ಎಂದು ಕೇಳಿದಳು.” ಆಗ ಅಂಗಡಿಯ ಮಾಲೀಕ  “ ಏನು ವಿಷಯ ಹೇಳಿ,”ಎಂದು ಕೇಳಿದ.  ಆಕೆ ಮಾಲೀಕನಿಗೆ “ಸರ್ ನಾನು ಕಾಲೇಜು ವಿದ್ಯಾರ್ಥಿನಿ ಬಡಮಕ್ಕಳ  ಆಶ್ರಮಕ್ಕೆಸಹಾಯ ಮಾಡಲು ಹಣಸಂಗ್ರಹ ಮಾಡುತ್ತಿದ್ದೇನೆ. ಇದರಿಂದಾಗಿ ನನಗೆ ಕಾಲೇಜಿನಲ್ಲಿ ಪಾಯಿಂಟ್ಸ್ ಬರುತ್ತವೆ. ದಯಮಾಡಿ ಸಹಾಯಮಾಡಿ. ಪ್ಲೀಸ್ ಸರ್ ಇಷ್ಟೇ ಕೊಡಬೇಕೆಂದು ನಿಯಮವಿಲ್ಲ. ನಿಮಗೆ ತೋಚಿದಷ್ಟು ಹಣ ಕೊಡಿ. ರಶೀದಿಯನ್ನು ನೀಡುವೆ” ಎಂದಳು.  ಅದಕ್ಕೆ ಮಾಲೀಕ “ಹಣ ಕೊಡಲಾಗುವುದಿಲ್ಲ. ಇಲ್ಲಿಂದ ಹೊರಡು” ಎಂದು ಗದರಿಸಿ ಕಳುಹಿಸಿದ. ನಾನು ಅಲ್ಲೇ ಎಲ್ಲವನ್ನೂ ನೋಡುತ್ತಿದ್ದುದರಿಂದ ಆ ಮಾರವಾಡಿ ವ್ಯಕ್ತಿ ನನಗೆ ಹೀಗೆ ಹೇಳಿದ. ಕೇಳಿ ಮೇಡಮ್, “ ಯಾರಿಗೆ ಬೇಕಾದರೂ ಹಣ ಕೊಡುವೆ....
Image
                                                           *ಮುಕ್ತಜೀವನ*                 ಮನುಷ್ಯ ಸಂಘಜೀವಿ. ಹುಟ್ಟಿನಿಂದಲೇ ತಂದೆ-ತಾಯಿ,  ಅಣ್ಣ-ತಂಗಿ, ಅಜ್ಜಿ-ಅಜ್ಜ ಎಂಬ ಎಂಬ ಅನೇಕ ಸಂಬಂಧಗಳು ಬೆಳೆಯುತ್ತವೆ. ಸಂಬಂಧಗಳ ಸುಳಿಯಲ್ಲಿ ಸುತ್ತುತ್ತಲೇ ಮಾಯೆ ಆವರಿಸಿ ರಾಗ- ದ್ವೇಷಗಳು ಹುಟ್ಟಿಕೊಳ್ಳುತ್ತವೆ.  ಈ ಬಂಧನಗಳ ಕಾರಣದಿಂದ ಮನುಷ್ಯ ಅನೇಕ ರೀತಿಯ ಕಷ್ಟಗಳಿಗೆ ಒಳಗಾಗುತ್ತಾನೆ. ಸಂತೋಷಕ್ಕಿಂತಲೂ ನೋವುಗಳೇ ಹೆಚ್ಚಾಗಿ ಬಾಧಿಸುತ್ತವೆ. ಅಶಾಂತಿ ಆವರಿಸುತ್ತದೆ.  ಇವುಗಳಿಂದ ಮುಕ್ತವಾಗಿ ಬಾಳಬೇಕಾದರೆ ಸಂಬಂಧಗಳನ್ನು ಪ್ರೇಮದಿಂದ ಅಲ್ಲದೇ ಸ್ನೇಹದಿಂದ ಹೊಂದಬೇಕು. ಸ್ನೇಹ ಸ್ವಾರ್ಥವಿಲ್ಲದ್ದು. ಅಲ್ಲಿ ಸ್ವತಂತ್ರವಿರುತ್ತದೆ. ಹಾಗಾಗಿಯೇ ಮಕ್ಕಳು ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಸ್ನೇಹದಲ್ಲಿ  ದ್ವೇಷ, ಕಲಹಗಳು ಕಡಿಮೆ. ನಾವು ಏರ್ಪಡಿಸಿಕೊಂಡಂತೆ ಬದುಕು ಒದಗುತ್ತದೆ. ಆದ್ದರಿಂದ ಯಾವುದರೊಂದಿಗೂ ನಾವು ಬಂಧಿಸಿಕೊಳ್ಳಬಾರದು. 'ಬಂಧನಗಳು ಮಾಯೆಯಲ್ಲ, ಬಂಧಿಸಿಕೊಳ್ಳುವುದು ಮಾಯೆ' ಎಂಬ ಸತ್ಯ ಅರಿತರೆ ಬದುಕು ಸುಖಮಯವಾದೀತು. ಜಗತ್ತಿನಲ್ಲಿ ಶಾ...
   * ಸಾಂಸಾರಿಕ ಪ್ರಕೃತಿ *                 ದಾಂಪತ್ಯದಲ್ಲಿ ಪ್ರೀತಿ ಮತ್ತು ಆಸಕ್ತಿ ಎರಡು ಹಳಿಗಳಂತೆ ಸದಾ ಜೊತೆಜೊತೆಗೇ ಸಾಗುವ ಪಯಣ. ರೈಲು ಸಾಗಲು ಎರಡು ಹಳಿಗಳು ಜೊತೆಗೆ ಇರಲೇಬೇಕಾದ್ದು ಅನಿವಾರ್ಯ. ಆದರೆ ದಾಂಪತ್ಯ ಜೀವನಪ್ರಯಾಣದಲ್ಲಿ ಪರಸ್ಪರ ಆಸಕ್ತಿ ಇಲ್ಲದಿದ್ದರೆ, ಅಥವಾ ಏಕಮುಖ ಪ್ರೀತಿ ಆದರೆ ಹಾದಿ ಸಾಗದು‌. ಗುರಿಯು ತಪ್ಪಬಹುದು. ಸಂಸಾರದಲ್ಲಿ ಎರಡು ಹೃದಯಗಳ ಪಯಣ  ಹಳಿಗಳಂತೆ  ಅನಿವಾರ್ಯಕ್ಕಾಗಿ,ಅಗತ್ಯಕ್ಕಾಗಿ    ಅಲ್ಲದೆ ಇಷ್ಟದ ಬಾಳುವೆಯಾಗಬೇಕು. ಒಂದೇ ಗೂಡಿನ ಹಕ್ಕಿಗಳಾದ ಮೇಲು ಪಂಚೇಂದ್ರಿಯಗಳ ಆಸೆಗೆ ಮನಸ್ಸು ಹಾರದೆ ಸದಾ ನಂಬಿದವರಲ್ಲಿ ಆಸಕ್ತಿ ಕಾಯ್ದುಕೊಳ್ಳುವುದು ಅತ್ಯಂತ  ಅಗತ್ಯ.ಪ್ರೀತಿಯಿಂದ ಅದರ ಜೀವಂತಿಕೆಯನ್ನು ಇಬ್ಬರೂ ಉಳಿಸಿಕೊಳ್ಳುವುದೇ ಸಂಸಾರಿಕಪ್ರಕೃತಿ.  - ಅನುಕೃತಿ
Image
          ಪ್ರೀತಿ ಕಟ್ಟುವ ಪ್ರತೀಕ        ಕುಟುಂಬದಲ್ಲಿ ಪ್ರೀತಿಯೆಂಬುದು ನಿತ್ಯ ಕಟ್ಟುವ ಕ್ರಿಯೆ. ಅದು ಜೀವಿಯನ್ನು ರಕ್ಷಿಸುವ ಜೀವಕೋಶದಂತೆ ಕಾರ್ಯನಿರ್ವಾಹಕ.ಪ್ರತಿ ಜೀವಿಯಲ್ಲೂ ಜೀವ ಕೋಶಗಳು ನಿತ್ಯವೂ ಸಾಯುತ್ತವೆ. ಹಾಗೇ ಹೊಸ ಜೀವಕೋಶಗಳು ಹುಟ್ಟುತ್ತಾ ಜೀವಂತವಾಗಿ ಇರಲು ಸಹಾಯಕವಾಗಿವೆ. ನಮ್ಮ ಜೀವನ ಪಯಣದುದ್ದಕ್ಕೂ ನಂಬಿಕೆ ಮತ್ತು ಪ್ರೀತಿ ಕಾಯ್ದಿಡಲು ನಿತ್ಯ ಕಟ್ಟು ಕ್ರಿಯೆ ನಿಶ್ಚಿತವಾಗಿ ನಡೆಯುತ್ತಿರಬೇಕಾಗಿದೆ. ಪ್ರೀತಿಯನ್ನು ಪುನ:ಶ್ಚೇತನಗೊಳಿಸುವ ಪರಿ ಅರಿತು ಬಾಳಿದರೆ ಸಂಬಂಧಗಳು ಅಳಿಯದೆ ಉಳಿಯಬಹುದು. ಇದೇ ಜೀವಂತ ಲಹರಿ .- ಅನುಕೃತಿ
Image
        ಅನ್ನದೇಗುಲ ಎಂಬ ವಾಸ್ತವ ಕವಿತೆ - ಅನಿತ ಅನುಕೃತಿ          ಮನುಷ್ಯನ ಬದುಕನ್ನು ಕಾಲಕಾಲಕ್ಕೆ  ಇತಿಹಾಸವಾಗಿಸುವಲ್ಲಿ ಸಾಹಿತ್ಯದ ಹಾದಿಯು ಹಿರಿದು. ಈ ನಿಟ್ಟಿನಲ್ಲಿ ಕಾವ್ಯ ಛಂದಸ್ಸು, ಅಲಂಕಾರಗಳಿಂದ ಸಿಗಂರಿಸಿಕೊಂಡು ಮನಸ್ಸಿಗೆ ಮುದ ನೀಡುವ ಪ್ರಕಾರ ಕಾವ್ಯ...... ಆಧುನಿಕ  ಕಾವ್ಯವು ಶಾಸ್ತ್ರೀಯ ಚೌಕಟ್ಟನ್ನು ಮೀರಿಯು ಹೊಸ ಪ್ರಾಸದೊಂದಿಗೆ ಸುಂದರ ಪದಪುಂಜಗಳಲ್ಲಿ ರೂಪುಗೊಂಡು  ಸಹೃಯರ ತನುಮನಗಳಿಗೆ ತಂಪೆರೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಂದಿನ ಯುವಕವಿಗಳ ನವನವೀನ ಕವಿತೆಗಳು ಜೀವೋನ್ಮುಖಿ ಚಿಂತನೆಗಳೊಂದಿದೆ ರಚನೆಯಾಗುತ್ತಿರುವುದು ಕನ್ನಡ ಸಾಹಿತ್ಯದ ಬೆಳವಣಿಗೆಯ  ಯುವೋದಯದ ಕಾಲವಾಗಿ ಕಾಣಬಹುದಾಗಿದೆ. ಈ ದಿಸೆಯಲ್ಲಿ ಪ್ರಸ್ತುತ ಸಮಾಜದ ವಾಸ್ತವ ಕನ್ನಡಿಯ ಹಲವು ಕವಿತೆಗಳು ಅತ್ಯಂತ ಜವಾಬ್ದಾರಿಯುತವಾಗಿ ರಚನೆಗೊಳ್ಳುತ್ತಿವೆ. ಈ ರಚನೆಗಳು ಕಳೆದ ಶತಮಾನದ ಕಾವ್ಯಲೋಕದ ಸ್ಥಿರಮಾದರಿಗಳಾಗಿ ಜನಿಸದಿದ್ದರೂ  ವಾಸ್ತವವನ್ನು ಪ್ರತಿನಿಧಿಸುವ ಸರಳ ಶೈಲಿ ಕಾವ್ಯಶಕ್ತಿಗಳಾಗಿವೆ. ಅಂಕುರ ಅವರ 'ಅನ್ನ ದೇಗುಲ' ಕವಿತೆಯು ಎತ್ತಿಕೊಂಡವರ ಕೂಸು ಸಂಕಲನದ  ಸಾತ್ವಿಕ ಚಿಂತನೆಯಾಗಿ ಶೋಧಿಸಬಹುದು. ಈ ಕವಿತೆಯ ಒಳಪದರುಗಳನ್ನು ನಮ್ಮ ತುರ್ತುಗಳಿಗೆ ವ್ಯವಸ್ಥಿತಗೊಳಿಸಿ ನೋಡಿದರೆ ಹಲವು ಹೊಸ ಆಯಾಮಗಳು ದೊರೆಯಬಹುದು. ಅನ್ನ ದೇಗುಲದೊಳಗೆ ...