*ಅನುಕರಿಸುವ ತತ್ವ*
     
   
   ಮನುಷ್ಯ ಬದುಕಿನಲ್ಲಿ ಸತ್ಯ ಮತ್ತು ಸುಳ್ಳು ಎರಡೂ ನಮ್ಮನ್ನು ಪ್ರಭಾವಿಸುತ್ತವೆ. ಸತ್ಯ ಒಳಿತನ್ನು ಬಯಸಿದರೆ, ಸುಳ್ಳು ಕೇಡನ್ನು ಬಯಸುತ್ತದೆ. ಈ ಎರಡರಲ್ಲಿ ಯಾವುದನ್ನು ಅನುಸರಿಸಬೇಕೆಂಬ ಆಯ್ಕೆ ನಮ್ಮ ಸಂಸ್ಕಾರದ ಮೇಲೆ ನಿಂತಿರುತ್ತದೆ. 'ಗುಲಾಬಿ' ಗಿಡದಲ್ಲಿ  ಸುಂದರವಾದ ಹೂ, ಚುಚ್ಚುವ ಮುಳ್ಳು ಎರಡೂ ಇರುತ್ತವೆ. ನಮಗೆ ನೋವಾಗದ ಹೂವನ್ನೇ ಬಿಡಿಸಿಕೊಳ್ಳುತ್ತೇವೆ. ಹಾಗೆಯೇ, ನಮಗೆ  ತೊಂದರೆಯಾಗದಂತೆ, ಹಾಗೂ  ಇತರರಿಗೂ ತೊಂದರೆ ನೀಡದಂತೆ ಬದುಕಬೇಕಾದರೆ  ಸತ್ಯದ ಹಾದಿಯನ್ನು ಆಯ್ಕೆ ಮಾಡಿಕೊಳ್ಳವುದು ಉಚಿತ.

 ಮನುಷ್ಯ ಬದುಕಬೇಕಾದರೆ ಒಳ್ಳೆಯತನ, ಸತ್ಯ,ಪ್ರಾಮಾಣಿಕತೆ ಬಹಳ ಅಗತ್ಯ. ನಮ್ಮ ಆತ್ಮತೃಪ್ತಿಯೇ ಅಂತಿಮವಾಗಿ ನಿಲ್ಲಬೇಕಾದ್ದು. ಆದ್ದರಿಂದ ಈ ಮೌಲ್ಯಗಳನ್ನು ಅನುಸರಿಸಿದಾಗಲೇ ಮಹತ್ವ ತಿಳಿವುದು. ಈ ಅರಿವು ಬಂದಾಗ ' ಹರನೆಂಬುದೇ ಸತ್ಯ, ಸತ್ಯವೆಂಬುದೇ ಹರನು.' ಎಂಬ ಮಾತು ಸಾಕ್ಷಿಭೂತವಾಗಿ ನಿಲ್ಲಬಹುದು. - ಅನುಕೃತಿ

Comments

Popular posts from this blog