ಉಬುಂಟು
   ಉಬುಂಟು ಒಂದು ಒಳ್ಳೆಯ ಕಥೆ. ಆಫ್ರಿಕಾದ ಉಬುಂಟು ಸಂಸ್ಕೃತಿ ಪ್ರೇರಣಾತ್ಮಕವಾದುದು. ಒಮ್ಮೆ ಒಬ್ಬ ಮಾನವಶಾಸ್ತ್ರಜ್ಞರು ಆಫ್ರಿಕನ್ ಬುಡಕಟ್ಟಿನ ಆಟವನ್ನು ಪ್ರಸ್ತಾಪಿಸಿದರು.

ಅವರು ಒಂದು ಮರದ ಸಮೀಪ ಸಿಹಿತಿಂಡಿಗಳ ಒಂದು ಬುಟ್ಟಿಯನ್ನು ಇರಿಸಿದರು ಮತ್ತು ಮಕ್ಕಳನ್ನು ೧೦೦ ಮೀಟರ್ ದೂರ ನಿಲ್ಲಿಸಿದರು. ನಂತರ ಅವರು ಮಕ್ಕಳಿಗೆ "ಯಾರು ಮೊದಲು ತಲುಪುವರೋ ಅವರು ಬುಟ್ಟಿಯಲ್ಲಿನ ಎಲ್ಲಾ ಸಿಹಿತಿಂಡಿಗಳನ್ನು ಪಡೆಯುತ್ತಾರೆ." ಎಂದು ಘೋಷಿಸಿದರು. 'ರೆಡಿ ಸ್ಟಡಿ ಗೊ!' ಎಂದರು.

ಈ ಮಕ್ಕಳು ಈಗ ಏನು ಮಾಡಿದರೆಂದು ನಿಮಗೆ ಊಹಿಸಲು ಸಾಧ್ಯವೆ? ಅವರು ಎಲ್ಲರೂ ಪರಸ್ಪರ ಕೈಗಳನ್ನು ಹಿಡಿದಿದ್ದರು. ನಂತರ ಒಟ್ಟಿಗೆ ಮರದ ಬಳಿ ಓಡಿದರು. ಅಲ್ಲಿ ಇರಿಸಿದ್ದ ಬುಟ್ಟಿಯಲ್ಲಿನ ಸಿಹಿ ತಿಂಡಿಗಳನ್ನು ಸಮಾನವಾಗಿ ಹಂಚಿಕೊಂಡು ತಿಂದು ಸಂತೋಷಪಟ್ಟರು. ಆಗ ಮಾನವಶಾಸ್ತ್ರಜ್ಞರು ಮಕ್ಕಳನ್ನು ಕುರಿತು ಯಾಕೆ ಹೀಗೆ ಮಾಡಿದಿರೆಂದು ಕೇಳಿದಾಗ ಅವರು 'ಉಬುಂಟು' ಎಂದು ಉತ್ತರಿಸಿದರು. ಇದರ ಅರ್ಥವೇನೆಂದರೆ ಇತರರು ದುಃಖಗೊಂಡಾಗ ಒಬ್ಬರಿಗೆ ಹೇಗೆ ಸಂತೋಷವಾಗಬಹುದು?  ಎಂದು.

'ಉಬುಂಟು' ಎಂದರೆ ಆಫ್ರಿಕನ್ ಬುಡಕಟ್ಟು ಭಾಷೆಯಲ್ಲಿ "ನಾನು ಎಂದರೆ ನಾವು." ಈ ಉತ್ತಮ ಸಂದೇಶ ಎಲ್ಲಾ ಪೀಳಿಗೆಯವರಿಗೂ ಅನ್ವಯವಾಗುವಂತಹುದು.

ನಾವೆಲ್ಲರೂ ಇಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಎಲ್ಲಿಗೆ ಹೋದರೂ ಸಂತೋಷವನ್ನು ಹರಡೋಣ. ಉಬುಂಟು ಜೀವನವನ್ನು ಹೊಂದೋಣ.

 'ನಾನು ಎಂದರೆ ನಾವು.'

         -ಅನುಕೃತಿ

Comments

Popular posts from this blog