* ಸಾಂಸಾರಿಕ ಪ್ರಕೃತಿ *
         
      ದಾಂಪತ್ಯದಲ್ಲಿ ಪ್ರೀತಿ ಮತ್ತು ಆಸಕ್ತಿ ಎರಡು ಹಳಿಗಳಂತೆ ಸದಾ ಜೊತೆಜೊತೆಗೇ ಸಾಗುವ ಪಯಣ. ರೈಲು ಸಾಗಲು ಎರಡು ಹಳಿಗಳು ಜೊತೆಗೆ ಇರಲೇಬೇಕಾದ್ದು ಅನಿವಾರ್ಯ. ಆದರೆ ದಾಂಪತ್ಯ ಜೀವನಪ್ರಯಾಣದಲ್ಲಿ ಪರಸ್ಪರ ಆಸಕ್ತಿ ಇಲ್ಲದಿದ್ದರೆ, ಅಥವಾ ಏಕಮುಖ ಪ್ರೀತಿ ಆದರೆ ಹಾದಿ ಸಾಗದು‌. ಗುರಿಯು ತಪ್ಪಬಹುದು. ಸಂಸಾರದಲ್ಲಿ ಎರಡು ಹೃದಯಗಳ ಪಯಣ  ಹಳಿಗಳಂತೆ  ಅನಿವಾರ್ಯಕ್ಕಾಗಿ,ಅಗತ್ಯಕ್ಕಾಗಿ    ಅಲ್ಲದೆ ಇಷ್ಟದ ಬಾಳುವೆಯಾಗಬೇಕು. ಒಂದೇ ಗೂಡಿನ ಹಕ್ಕಿಗಳಾದ ಮೇಲು ಪಂಚೇಂದ್ರಿಯಗಳ ಆಸೆಗೆ ಮನಸ್ಸು ಹಾರದೆ ಸದಾ ನಂಬಿದವರಲ್ಲಿ ಆಸಕ್ತಿ ಕಾಯ್ದುಕೊಳ್ಳುವುದು ಅತ್ಯಂತ  ಅಗತ್ಯ.ಪ್ರೀತಿಯಿಂದ ಅದರ ಜೀವಂತಿಕೆಯನ್ನು ಇಬ್ಬರೂ ಉಳಿಸಿಕೊಳ್ಳುವುದೇ ಸಂಸಾರಿಕಪ್ರಕೃತಿ.  - ಅನುಕೃತಿ

Comments

Popular posts from this blog