ಪ್ರೀತಿ ಕಟ್ಟುವ ಪ್ರತೀಕ
ಕುಟುಂಬದಲ್ಲಿ ಪ್ರೀತಿಯೆಂಬುದು ನಿತ್ಯ ಕಟ್ಟುವ ಕ್ರಿಯೆ. ಅದು ಜೀವಿಯನ್ನು ರಕ್ಷಿಸುವ ಜೀವಕೋಶದಂತೆ ಕಾರ್ಯನಿರ್ವಾಹಕ.ಪ್ರತಿ ಜೀವಿಯಲ್ಲೂ ಜೀವ ಕೋಶಗಳು ನಿತ್ಯವೂ ಸಾಯುತ್ತವೆ. ಹಾಗೇ ಹೊಸ ಜೀವಕೋಶಗಳು ಹುಟ್ಟುತ್ತಾ ಜೀವಂತವಾಗಿ ಇರಲು ಸಹಾಯಕವಾಗಿವೆ. ನಮ್ಮ ಜೀವನ ಪಯಣದುದ್ದಕ್ಕೂ ನಂಬಿಕೆ ಮತ್ತು ಪ್ರೀತಿ ಕಾಯ್ದಿಡಲು ನಿತ್ಯ ಕಟ್ಟು ಕ್ರಿಯೆ ನಿಶ್ಚಿತವಾಗಿ ನಡೆಯುತ್ತಿರಬೇಕಾಗಿದೆ. ಪ್ರೀತಿಯನ್ನು ಪುನ:ಶ್ಚೇತನಗೊಳಿಸುವ ಪರಿ ಅರಿತು ಬಾಳಿದರೆ ಸಂಬಂಧಗಳು ಅಳಿಯದೆ ಉಳಿಯಬಹುದು. ಇದೇ ಜೀವಂತ ಲಹರಿ.- ಅನುಕೃತಿ

Comments
Post a Comment