*ಮುಕ್ತಜೀವನ*
ಮನುಷ್ಯ ಸಂಘಜೀವಿ. ಹುಟ್ಟಿನಿಂದಲೇ ತಂದೆ-ತಾಯಿ, ಅಣ್ಣ-ತಂಗಿ, ಅಜ್ಜಿ-ಅಜ್ಜ ಎಂಬ ಎಂಬ ಅನೇಕ ಸಂಬಂಧಗಳು ಬೆಳೆಯುತ್ತವೆ. ಸಂಬಂಧಗಳ ಸುಳಿಯಲ್ಲಿ ಸುತ್ತುತ್ತಲೇ ಮಾಯೆ ಆವರಿಸಿ ರಾಗ- ದ್ವೇಷಗಳು ಹುಟ್ಟಿಕೊಳ್ಳುತ್ತವೆ. ಈ ಬಂಧನಗಳ ಕಾರಣದಿಂದ ಮನುಷ್ಯ ಅನೇಕ ರೀತಿಯ ಕಷ್ಟಗಳಿಗೆ ಒಳಗಾಗುತ್ತಾನೆ. ಸಂತೋಷಕ್ಕಿಂತಲೂ ನೋವುಗಳೇ ಹೆಚ್ಚಾಗಿ ಬಾಧಿಸುತ್ತವೆ. ಅಶಾಂತಿ ಆವರಿಸುತ್ತದೆ. ಇವುಗಳಿಂದ ಮುಕ್ತವಾಗಿ ಬಾಳಬೇಕಾದರೆ ಸಂಬಂಧಗಳನ್ನು ಪ್ರೇಮದಿಂದ ಅಲ್ಲದೇ ಸ್ನೇಹದಿಂದ ಹೊಂದಬೇಕು. ಸ್ನೇಹ ಸ್ವಾರ್ಥವಿಲ್ಲದ್ದು. ಅಲ್ಲಿ ಸ್ವತಂತ್ರವಿರುತ್ತದೆ. ಹಾಗಾಗಿಯೇ ಮಕ್ಕಳು ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಸ್ನೇಹದಲ್ಲಿ ದ್ವೇಷ, ಕಲಹಗಳು ಕಡಿಮೆ. ನಾವು ಏರ್ಪಡಿಸಿಕೊಂಡಂತೆ ಬದುಕು ಒದಗುತ್ತದೆ. ಆದ್ದರಿಂದ ಯಾವುದರೊಂದಿಗೂ ನಾವು ಬಂಧಿಸಿಕೊಳ್ಳಬಾರದು. 'ಬಂಧನಗಳು ಮಾಯೆಯಲ್ಲ, ಬಂಧಿಸಿಕೊಳ್ಳುವುದು ಮಾಯೆ' ಎಂಬ ಸತ್ಯ ಅರಿತರೆ ಬದುಕು ಸುಖಮಯವಾದೀತು. ಜಗತ್ತಿನಲ್ಲಿ ಶಾಂತಿಯೂ ನೆಲೆಸೀತು. - ಅನುಕೃತಿ

Comments
Post a Comment